Hanagal, Feb. 11: A nature study activity was conducted for LKG students herein Rashtrotthana Vidya Kendra – Hanagal. The students observed the surroundings in the fresh air. They observed the green, red and yellow leaves. They listened to the chirping of birds and saw the insects living in the soil. The children played outside and learnt the importance of protecting trees and flowers.


ಹಾನಗಲ್‌, ಫೆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಅಧ್ಯಯನ ಚಟುವಟಿಕೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ತಾಜಾ ಗಾಳಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದರು. ಹಸಿರು, ಕೆಂಪು ಮತ್ತು ಹಳದಿ ಬಣ್ಣದ ಎಲೆಗಳನ್ನು ಗಮನಿಸಿದರು. ಹಕ್ಕಿಗಳ ಚಿಲಿಪಿಲಿಗಳನ್ನು ಆಲಿಸಿ ಮಣ್ಣಿನಲ್ಲಿ ವಾಸಿಸುವ ಕೀಟಗಳನ್ನು ನೋಡಿದರು. ಮಕ್ಕಳು ಹೊರಗಡೆ ಆಟವಾಡಿ ಮರಗಳು ಹೂವುಗಳನ್ನು ರಕ್ಷಿಸುವ ಮಹತ್ತ್ವವನ್ನು ಕಲಿತುಕೊಂಡರು.