Hangal, Dec.11: The annual sports meet ‘Kreedotkarsha’ for the year 2025-26 was organized herein Rashtrotthana Vidya Kendra – Hangal.

Sri Karabasappa Gondi, who arrived as the chief guest for the program, and the visiting dignitaries were brought to the ground with a disciplined parade by four channels and a guest salute and a procession were held.

A well-organized march past and flag hoisting were held by four channels.

Students performed many cultural and sports performances like Ribbon dance, Dumbbells show, Zumba dance.

Chief guest Sri Karabasappa Gondi motivated the gathering through his speech. Pradhanacharya administered the sports oath.

The Chief Guest and the Pradhanacharya formally inaugurated the sports meet by throwing the shot put.

Sports like Pencil in the Bottle, Pop and Pick, Brick Race, Cone Race, Speed ​​Agility, Cone Shifting, Cup in Pencil and finally Tug of War were conducted for the students of classes 3, 4, 5 and 6.

ಹಾನಗಲ್‌, ಡಿ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ‘ಕ್ರೀಡೋತ್ಕರ್ಷ’ವನ್ನು ಆಯೋಜಿಸಲಾಗಿತ್ತು. 

1ನೇ ದಿನ:

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಕರಬಸಪ್ಪ ಗೊಂದಿ ಅವರನ್ನು ಹಾಗೂ ಆಗಮಿಸಿದ ಗಣ್ಯರನ್ನು ನಾಲು ವಾಹಿನಿಗಳು ಶಿಸ್ತುಬದ್ಧವಾದ ಪೆರೇಡ್‌ನೊಂದಿಗೆ ಮೈದಾನಕ್ಕೆ ಕರೆತರಲಾಯಿತು ಹಾಗೂ ಅತಿಥಿ ಪ್ರಣಾಮ ಹಾಗೂ ಕವಾಯತು ನಡೆಯಿತು.

ನಾಲ್ಕು ವಾಹಿನಿಗಳಿಂದ ಸುಸಂಘಟಿತ ಮಾರ್ಚ್ ಪಾಸ್ಟ್ ಮತ್ತು ಧ್ವಜಾರೋಹಣ ನಡೆಯಿತು. 

ವಿದ್ಯಾರ್ಥಿಗಳು ರಿಬ್ಬನ್‌ ನೃತ್ಯ, ಡಂಬೆಲ್ಸ್‌ ಪ್ರದರ್ಶನ, ಜುಂಬಾ ನೃತ್ಯದಂತಹ ಹಲವು ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರದರ್ಶನಗಳನ್ನು ಪ್ರದರ್ಶಿಸಿದರು.

ಮುಖ್ಯ ಅತಿಥಿ ಶ್ರೀ ಕರಬಸಪ್ಪ ಗೊಂದಿ ಅವರು ತಮ್ಮ ಭಾಷಣದ ಮೂಲಕ ಸಭೆಯನ್ನು ಪ್ರೇರೇಪಿಸಿದರು. ಪ್ರಧಾನಾಚಾರ್ಯಾ ಅವರು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.

ಅತಿಥಿಗಳು ಮತ್ತು ಪ್ರಧಾನಾಚಾರ್ಯರು ಶಾಟ್ ಪುಟ್ ಎಸೆಯುವ ಮೂಲಕ ಕ್ರೀಡಾಕೂಟವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

3, 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಪೆನ್ಸಿಲ್ ಇನ್ ದಿ ಬಾಟಲ್, ಪಾಪ್ ಅಂಡ್ ಪಿಕ್, ಇಟ್ಟಿಗೆ ರೇಸ್, ಕೋನ್ ರೇಸ್, ಸ್ಪೀಡ್ ಅಜಿಲಿಟಿ, ಕೋನ್ ಶಿಫ್ಟಿಂಗ್, ಕಪ್ ಇನ್ ಪೆನ್ಸಿಲ್ ಮತ್ತು ಕೊನೆಯಲ್ಲಿ ಹಗ್ಗ ಜಗ್ಗಾಟನಂತಹ ಕ್ರೀಡೆಗಳನ್ನು ನಡೆಸಲಾಯಿತು.

2ನೇ ದಿನ:

ಗೋಕುಲಂ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು.

ಇದರ ನಂತರ ಹಲವಾರು ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರದರ್ಶನಗಳು ನಡೆದವು.

* 1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಮತ್ತು ಶಕ್ತಿಯುತ ಸಾಮೂಹಿಕ ವ್ಯಾಯಾಮ (Mass PT), 

* ಗೋಕುಲಂ ವಿದ್ಯಾರ್ಥಿಗಳಿಂದ ಅದ್ಭುತ ನೃತ್ಯ ಪ್ರದರ್ಶನ ಗಮನ ಸೆಳೆದವು.

* LKG, UKG,1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಕ್ಯಾರೆಟ್ ರೇಸ್ (Carrot race), ಅಂಕುಡೊಂಕಾದ ಓಟ (Zig-zag race), ಕೋನ್ ಬ್ಯಾಲೆನ್ಸಿಂಗ್ ರೇಸ್ (Cone balancing race), ಗೋಣಿ ಚೀಲದ ಓಟ (Sack race), ಹೂಪ್ ರೇಸ್ (Hoope race) ಸ್ಪರ್ಧೆಗಳು ನಡೆದವು. ಹಾಗೆಯೇ 3 ರಿಂದ 6 ನೇ ತರಗತಿ ವಿದ್ಯಾರ್ಥಿಗಳಿಗೆ ಕೋನ್ ರಿಲೇ (Cone relay), ನೀರು ತುಂಬುವುದು (Water Filling), ಬಲೂನ್ ಎಕ್ಸ್‌ಪ್ರೆಸ್ (Balloon Express) ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲರ ಸಮ್ಮುಖದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ʼವಿರಾಟ್‌ʼ ೨೦೨೫-೨೬ನೇ ಸಾಲಿನ ಚಾಂಪಿಯನ್‌ ವಾಹಿನಿ ಎಂದು ಘೋಷಿಸಲಾಯಿತು.