



Hangal, Aug. 29: National Sports Day was celebrated on the occasion of Major Dhyan Chand Jayanti herein Rashtrotthana Vidya Kendra – Hangal. Khushi, a student of class 5, explained the importance of National Sports Day, gave details behind this celebration on the occasion of hockey legend Dhyan Chand Jayanti and shared details about Dhyan Chand’s contribution to sports, his legendary status in hockey, and the Padma Bhushan he received for his achievements.
ಹಾನಗಲ್, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ನಲ್ಲಿ ಮೇಜರ್ ಧ್ಯಾನಚಂದ್ ಜಯಂತಿ ನಿಮಿತ್ತ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಯಿತು. 5ನೇ ತರಗತಿಯ ವಿದ್ಯಾರ್ಥಿನಿ ಖುಷಿ ರಾಷ್ಟ್ರೀಯ ಕ್ರೀಡಾ ದಿನದ ಮಹತ್ತ್ವವನ್ನು ವಿವರಿಸುತ್ತ, ಹಾಕಿ ದಂತಕಥೆ ಧ್ಯಾನಚಂದ್ ಜಯಂತಿ ನಿಮಿತ್ತ ಈ ಆಚರಣೆಯ ಹಿಂದಿನ ವಿವರಗಳನ್ನು ನೀಡಿದಳು ಹಾಗೂ ಧ್ಯಾನಚಂದ್ ಅವರ ಕ್ರೀಡೆಗಾಗಿನ ಕೊಡುಗೆ, ಹಾಕಿಯಲ್ಲಿನ ಅವರ ದಂತಕಥೆ ಸ್ಥಾನಮಾನ, ಅವರ ಸಾಧನೆಗೆ ಪದ್ಮಭೂಷಣ ದೊರೆತ ವಿವರಗಳನ್ನು ಹಂಚಿಕೊಂಡಳು.