







Hangal, Dec. 10: World Human Rights Day was celebrated herein Rashtrotthana Vidya Kendra – Hangal under the joint organization of Taluk Legal Services Committee, Hangal and Lawyers Association. Smt. Aishwarya Chidananda Pattanashetty, Sri M.C. Mahanthimath and Smt. Sridevi V.M. were the chief guests for the program, while Senior Civil Judge Sri Amola J. Hirikudde inaugurated the program. Sri Praveen Kumar H. presided over the program. Smt. Shruti T. Jadhav spoke on the meaning and importance of law. Sri Pawan Vasudhaiva Kutumbakam and school culture were highlighted. Smt. Aishwarya spoke on the values of life and the importance of reciting the Shlokas 108 times. Sri Mahanthimath emphasized on moral values and culture.
ಹಾನಗಲ್, ಡಿ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್ನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಹಾನಗಲ್ ಮತ್ತು ವಕೀಲರ ಸಂಘದ ಜಂಟಿ ಸಂಘಟನೆಯ ಅಡಿಯಲ್ಲಿವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಐಶ್ವರ್ಯ ಚಿದಾನಂದ ಪಟ್ಟಣಶೆಟ್ಟಿ, ಶ್ರೀ ಎಂ.ಸಿ. ಮಹಾಂತಿಮಠ ಮತ್ತು ಶ್ರೀಮತಿ ಶ್ರೀದೇವಿ ವಿ.ಎಂ. ಇವರುಗಳು ಆಗಮಿಸಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಅಮೋಲಾ ಜೆ. ಹಿರಿಕುಡ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಪ್ರವೀಣ್ ಕುಮಾರ್ ಎಚ್. ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರುತಿ ಟಿ. ಜಾಧವ್ ಕಾನೂನಿನ ಅರ್ಥ ಮತ್ತು ಮಹತ್ವದ ಕುರಿತು ಮಾತನಾಡಿದರು. ಹಾಗೂ ಶ್ರೀ ಪವನ್ ವಸುಧೈವ ಕುಟುಂಬಕಂ ಮತ್ತು ಶಾಲಾ ಸಂಸ್ಕೃತಿಯನ್ನು ಎತ್ತಿ ತೋರಿಸಿದರು. ಶ್ರೀ ಮತಿ ಐಶ್ವರ್ಯ ಅವರು ಜೀವನದ ಮೌಲ್ಯಗಳು ಮತ್ತು ಶ್ಲೋಕಗಳನ್ನು 108 ಬಾರಿ ಪಠಿಸುವ ಮಹತ್ವದ ಕುರಿತು ಮಾತನಾಡಿದರು. ಶ್ರೀ ಮಹಾಂತಿಮಠ ನೈತಿಕ ಮೌಲ್ಯಗಳು ಮತ್ತು ಸಂಸ್ಕಾರವನ್ನು ಒತ್ತಿ ಹೇಳಿದರು.
