Hanagal, October 12: “Rasthrotthana Vidya Kendra is continuously doing great work to impart cultured education and develop good personality to the students. Apart from education, this institution is imparting good culture to the children and making them ideal persons in the society. Rashtrotthana Vidya Kendra, like a temple, makes Indian values a part of our lives,” said Sri Vishwanath. The registration process for the year 2025-26 was held herein Rashtrotthana Vidya Kendra – Hanagal. Sri Vishwanath was the chief guest on this occasion and spoke. The registration form was officially released and distributed in the program.
ಹಾನಗಲ್, ಅಕ್ಟೋಬರ್ 12: “ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಮತ್ತು ಉತ್ತಮ ವ್ಯಕ್ತಿತ್ವ ಬೆಳೆಸಲು ರಾಷ್ಟ್ರೋತ್ಥಾನ ವಿದ್ಯಾಲಯವು ನಿರಂತರವಾಗಿ ಶ್ರೇಷ್ಠ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು ಶಿಕ್ಷಣವನ್ನಲ್ಲದೇ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ನೀಡುತ್ತಾ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನು ರೂಪಿಸುತ್ತಿದೆ. ರಾಷ್ಟ್ರೋತ್ಥಾನ ವಿದ್ಯಾಲಯವು ದೇವಾಲಯದಂತೆ ಭಾರತೀಯ ಮೌಲ್ಯಗಳನ್ನೂ ನಮ್ಮ ಜೀವನದ ಭಾಗವಾಗಿಸುತ್ತದೆ” ಎಂದು ಶ್ರೀ ವಿಶ್ವನಾಥ್ ಅವರು ಅಭಿಪ್ರಾಯಪಟ್ಟರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಾನಗಲ್ ನಲ್ಲಿ2025-26ನೇ ಸಾಲಿನ ನೊಂದಣಿ ಪ್ರಕ್ರಿಯೆ ಪ್ರಾರಂಭ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವನಾಥ್ ಆಗಮಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ನೊಂದಣಿ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿ ವಿತರಿಸಲಾಯಿತು.