Green Day Celebration in RVK – Hangal

Hangal, June 13: Green Day was celebrated herein Gokulam section of Rashtrotthana Vidya Kendra – Hangal. Sri Praveen Lingerie graced the program. The students wore green attire symbolizing nature and environmental consciousness. The entire hall was beautifully decorated in green. The program began with the garlanding and watering of plants by the Chief Guests Sri Praveen Lingerie and the Principal Smt. Sridevi.Various engaging activities like drawing sessions, exhibition of vegetables and fruits emphasizing the importance of healthy food and natural products were conducted. Pre-KG student Sansevya Desai created environmental awareness through a monologue depicting the life of a tree. Smt. Shweta shared inspiring quotes on environmental conservation. ಹಾನಗಲ್‌, ಜೂ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾನಗಲ್‌ನಲ್ಲಿ ಗೋಕುಲಂ ವಿಭಾಗದಲ್ಲಿ ಹಸಿರು ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಪ್ರವೀಣ್ ಲಿಂಗೇರಿ ಅವರು ಆಗಮಿಸಿದ್ದರು. ಪ್ರಕೃತಿ ಮತ್ತು ಪರಿಸರ ಪ್ರಜ್ಞೆಯನ್ನು ಸಂಕೇತಿಸುವ ಹಸಿರು ಉಡುಪನ್ನು ವಿದ್ಯಾರ್ಥಿಗಳು ಧರಿಸಿದ್ದರು. ಇಡೀ ಸಭಾಂಗಣವನ್ನು ಹಸಿರು ಬಣ್ಣದಲ್ಲಿ ಸುಂದರವಾಗಿ ಅಲಂಕರಿಸಲಾಗಿತ್ತು. ಮುಖ್ಯ ಅತಿಥಿಗಳಾದ ಶ್ರಿ ಪ್ರವೀಣ್‌ ಲಿಂಗೇರಿ ಹಾಗೂ ಪ್ರಧಾನಾಚಾರ್ಯರಾದ ಶ್ರೀಮತಿ ಶ್ರೀದೇವಿ ಅವರು ನಡೆಸಿದ ಪುಷ್ಪಾರ್ಚನೆ ಮತ್ತು ಸಸ್ಯಗಳಿಗೆ ನೀರುಣಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ವಿವಿಧ ಆಕರ್ಷಕ ಚಟುವಟಿಕೆಗಳಾದ ಚಿತ್ರ ಬಿಡಿಸುವ ಅವಧಿಗಳು, ಆರೋಗ್ಯಕರ ಆಹಾರ ಮತ್ತು ನೈಸರ್ಗಿಕ ಉತ್ಪನ್ನಗಳ ಮಹತ್ವವನ್ನು ಒತ್ತಿಹೇಳುವ ತರಕಾರಿಗಳು ಮತ್ತು ಹಣ್ಣುಗಳ ಪ್ರದರ್ಶನ ಇವುಗಳನ್ನು ನಡೆಸಲಾಯಿತು. ಪ್ರೀ-ಕೆಜಿ ವಿದ್ಯಾರ್ಥಿನಿ ಸಂಸೇವ್ಯಾ ದೇಸಾಯಿ ಅವರಿಂದ ಏಕಪಾತ್ರಾಭಿನಯದ ಮೂಲಕ ಮರದ ಜೀವನವನ್ನು ಚಿತ್ರಿಸಿ ಪರಿಸರ ಜಾಗೃತಿಯನ್ನು ಬೆಳೆಸಿದಳು. ಶ್ರೀಮತಿ ಶ್ವೇತಾ ಪರಿಸರ ಸಂರಕ್ಷಣೆಯ ಕುರಿತು ಸ್ಪೂರ್ತಿದಾಯಕ ಉಲ್ಲೇಖಗಳನ್ನು ಹಂಚಿಕೊಂಡರು.
Scroll to Top